ಮಂಗಳೂರಿನ ಮಣ್ಣಿನ ಮಗ, ದೀಮಂತ ಹೋರಟಗಾರ, ಕೊಂಕಣ್ ರೈಲ್ವೆಯ ರೂವಾರಿ, ನೇರ ನಡೆ ನುಡಿಗಳ ರಾಜಕಾರಣಿ ದಿವಂಗತ ಜಾರ್ಜ್ ಫೆರ್ನಾಂಡಿಸ್‍ರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲು ಮಂಗಳೂರು ನಾಗರಿಕರ ಪರವಾಗಿ ಸಾರ್ವಜನಿಕ ಶೃಂದ್ಧಾಂಜಲಿ ಸಭೆಯನ್ನು ದಿನಾಂಕ 5-02-2019 ರಂದು ಮಂಗಳವಾರ ಸಾಯಂಕಾಲ 5.30 ಕ್ಕೆ ಮಂಗಳೂರಿನ ಬಿಜೈ ಚರ್ಚ್ ಸಭಾಂಗಣದಲ್ಲಿ ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇವರು ಆಯೋಜಿಸಿರುತ್ತಾರೆ. ಈ ಸಭೆಗೆ ದಿವಂಗತ ಜಾರ್ಜ್ ಫೆರ್ನಾಂಡಿಸ್ ಇವರು ಭಾರತ ದೇಶಕ್ಕೆ ಕೊಟ್ಟ ನಾಯಕತ್ವ ಹಾಗೂ ಸೇವೆಯನ್ನು ಮನದಲ್ಲಿಟ್ಟುಕೊಂಡು ಜಾತಿ, ಮತ, ಪಕ್ಷವೆಂಬ ಭೇದವಿಲ್ಲದೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಭಾಗವಹಿಸಬೇಕಾಗಿ ಮಂಗಳೂರು ಧರ್ಮಪ್ರಾಂತ್ಯದ ಕಥೊಲಿಕ್ ಸಭಾ ಸಂಘಟನೆಯ ಅಧ್ಯಕ್ಷ ರೊಲ್ಫಿ ಡಿ,ಕೊಸ್ತಾ ಇವರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಉಪಸ್ಥಿತರಿರುವರು:

1. ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಧರ್ಮಾಧ್ಯಕ್ಷರು ಮಂಗಳೂರು ಧವರ್iಪ್ರಾಂತ್ಯ
2. ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಅನುವಂಶೀಕ ಪ್ರಧಾನ ಅರ್ಚಕರು ಕಟೀಲು ಶ್ರೀ ದುರ್ಗಪರಮೇಶ್ವರಿ ದೇವಾಸ್ಥಾನ ಕಟೀಲು
3. ಶ್ರೀ ಮಹಮ್ಮದ್ ಕುಂಞ ವ್ಯವಸ್ಥಾಪಕರು ಶಾಂತಿ ಪ್ರಕಾಶನ ಬಿ.ಬಿ.ಅಲಬಿ ರೋಡ್ ಮಂಗಳೂರು
4. ಶ್ರೀ ಯು.ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಗೂ ನಗರಾಭಿವೃಧ್ಧಿ ಸಚಿವರು ಕರ್ನಾಟಕ ಸರಕಾರ
5. ಶ್ರೀ ಭಾಸ್ಕರ ಮೊಇಲಿ ಮಹಾಪೌರರು ಮಂಗಳೂರು ಮಹಾನಗರ ಪಾಲಿಕೆ
6. ಶ್ರೀ ಐವನ್ ಡಿಸೋಜ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ ಕಂದಾಯ ಇಲಾಖೆ ಹಾಗೂ ವಿಧಾನ ಪರಿಷತ್ ಸದಸ್ಯರು ಕರ್ನಾಟಕ ಸರಕಾರ
7. ಶ್ರೀ ವೇದವ್ಯಾಸ ಕಾಮತ್ ಶಾಸಕರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ
8. ಶ್ರೀ ಉಮಾನತ್ ಕೋಟ್ಯಾನ್ ಮೂಲ್ಕಿ ಮೂಡಬಿದ್ರೆ ಶಾಸಕರು
9. ಭರತ್ ಶೆಟ್ಟಿ ಶಾಸಕರು ಮಂಗಳೂರು ಉತ್ತರ
10. ಸಂಜೀವ ಮಠಂದೂರು ಪುತ್ತೂರು ಶಾಸಕರು
11. ಶ್ರೀ ಹರೀಶ್ ಪೂಂಜ ಬೆಳ್ತಂಗಡಿ ಶಾಸಕರು
12. ಶ್ರೀ ರಾಜೇಶ್ ನಾಯಕ್ ಬಂಟ್ವಾಳ ವಿಧಾನಸಭಾ ಶಾಸಕರು
13. ಶ್ರೀ ಅಂಗಾರ ಸುಳ್ಯ ವಿಧಾನಸಭಾ ಶಾಸಕರು
14. ಶ್ರೀ ಎಸ್. ಎಲ್.ಬೊಜೆ ಗೌಡ ನೈರುತ್ಯ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಸದಸ್ಯರು
15. ಶ್ರೀ ರಮನಾಥ ರೈ ಮಾಜಿ ಉಸ್ತುವಾರಿ ಸಚಿವರು
16. ಶ್ರೀ ವಿನಯ್ ಕುಮಾರ್ ಸೊರಕೆ ಮಾಜಿ ಉಡುಪಿ ಜಿಲ್ಲಾ ಸಚಿವರು
17. ಅಭಯ್ ಚಂದ್ರ ಜೈನ್ ಮಾಜಿ ಸಚಿವರು
18. ಶ್ರೀ ಮೈಕಲ್ ಫೆರ್ನಾಂಡಿಸ್ ದಿವಂಗತ ಜಾರ್ಜ್ ಫೆರ್ನಾಂಡಿಸ್‍ರವರ ಸಹೋದರ ಹಾಗೂ ಮಾಜಿ ಶಾಸಕರು
19. ವಿಜಯ್ ಕುಮಾರ್ ಶೆಟ್ಟಿ ಮಾಜಿ ಶಾಸಕರು
20. ಶ್ರೀ ಹರಿಕೃಷ್ಣ ಪುನರೂರು ಮಾಜಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು
21. ಶ್ರೀ ಹರೀಶ್ ಕುಮಾರ್ ವಿಧಾನಪರಿಷತ್ ಸದಸ್ಯರು ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ
22. ಶ್ರೀ ಮಹಮ್ಮದ್ ಕುಂಞ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಜನತಾದಳ

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474