ದಿನಾಂಕ 25/7/2025ರಂದು ಛತ್ತೀಸ್‍ಗಢದಲ್ಲಿ ಕೇರಳದ ಸಿಸ್ಟರ್ ಆಫ್ ಮೇರಿ ಇಮ್ಯಾಕ್ಯುಲೇಟ್ ಆಫ್ ಅಸ್ಸಿಸಿಯ ಸದಸ್ಯರಾದ ತಲಶ್ಶೇರಿಯ ಸಿಸ್ಟರ್ ವಂದನಾ ಫ್ರಾನ್ಸಿಸ್ ಮತ್ತು ಅಂಗಮಾಲಿಯ ಸಿಸ್ಟರ್ ಪ್ರೀತಿ ಮೇರಿ ಎಂಬ ಇಬ್ಬರು ಮಲಯಾಳಿ ಕಥೊಲಿಕ್ ಸನ್ಯಾಸಿನಿಯರು ಛತ್ತೀಸ್‍ಘಡದ ನಾರಾಯಣಪುರ ಜಿಲ್ಲೆಯ 18ರಿಂದ 19 ವರ್ಷದೊಳಗಿನ ಓರ್ವ ಯುವತಿಯನ್ನು ಮನೆ ಕೆಲಸಕ್ಕಾಗಿ ಹಾಗೂ ಇಬ್ಬರು ಯುವತಿಯರನ್ನು ನರ್ಸಿಂಗ್ ಶಿಕ್ಷಣಕ್ಕಾಗಿ ಕರೆದೊಯ್ಯುತ್ತಿದ್ದಾಗ ಜ್ಯೋತಿಶರ್ಮ ಎಂಬ ಯುವತಿಯ ನೇತೃತ್ವದಲ್ಲಿ ಪ್ರಯಾಣಕ್ಕೆ ತಡೆಯೊಡ್ಡಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಮತಾಂತರಗೊಳಿಸುವ ಆರೋಪವನ್ನು ಹೊರಿಸಿ ಹಾಗೂ ಅವರ ಮೇಲೆ ಭಾರತೀಯ ನ್ಯಾಯ ಸಂಹಿತೆ ಮತ್ತು ಧಾರ್ಮಿಕ ಮತಾಂತರ ಆರೋಪ ಹೊರಿಸಿರುವುದು ಹಾಗೂ ಬಂಧನಗೊಳಪಡಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ನಿರಪರಾಧಿ ಕ್ರೈಸ್ತ ಸನ್ಯಾಸಿನಿಯರ ಮೇಲೆ ಹೊರಿಸಿರುವ ಎಲ್ಲಾ ಆರೋಪಗಳನ್ನು ಹಿಂಪಡೆದುಕೊಂಡು ಕೂಡಲೇ ಬಂಧನದಿಂದ ಬಿಡುಗಡೆಗೊಳಿಸಬೇಕು ಹಾಗೂ ಅವರನ್ನು ಬಂಧಿಸಲು ಕಾರಣೀಕರ್ತರಾದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಈ ಧರ್ಮಭಗಿನಿಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ದಿನಾಂಕ 04-08-2025 ಸೋಮವಾರದಂದು ಅಪರಾಹ್ನ 4.00 ಗಂಟೆಗೆ ಮಂಗಳೂರು ಮಿನಿವಿಧಾನಸೌಧದ ಎದುರು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಇದರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ನಡೆಸಲಾಯಿತು. ಈ ಸಭೆಗೆ ಪಕ್ಷ, ಮತ, ಭೇದವನ್ನು ಮರೆತು ಮಾನವೀಯತೆಯನ್ನು ಹೊತ್ತ ಸುಮಾರು 6,000 ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು. ಕಥೊಲಿಕ್ ಸಭಾ ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿಯವರಾದ ಶ್ರೀ ಪೌಲ್ ರೋಲ್ಫಿ ಡಿಕೋಸ್ತಾರವರು ಇಂದಿನ ಪ್ರತಿಭಟನೆಯ ಉದ್ಧೇಶದ ಬಗ್ಗೆ ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಯವರಾದ ಶ್ರೀ ರೋಯ್ ಕ್ಯಾಸ್ಟೆಲಿನೊ, ಧಾರ್ಮಿಕ ಸಂಸ್ಥೆಗಳ ಒಕ್ಕೂಟ, ಮಂಗಳೂರು ಇದರ ಅಧ್ಯಕ್ಷರಾದ ವಂದನೀಯ ಡೊಮಿನಿಕ್ ವಾಸ್ ಒಸಿಡಿ, ಸಿಸ್ಟರ್ ಸೆವ್ರಿನ್ ಮಿನೇಜಸ್, ಸೈಂಟ್ ಆನ್ಸ್ ಪ್ರೋವಿಡೆನ್ಸ್, ಕಥೊಲಿಕ್ ಸಭಾ ನಿಕಟಪೂರ್ವ ಅಧ್ಯಕ್ಷರಾದ ಶೀ ಓಲ್ವಿನ್ ಡಿಸೋಜಾ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀ ಸ್ಟೇನಿ ಲೋಬೊರವರು ಸಭೆಯನ್ನು ಉದ್ಧೇಶಿಸಿ ಮಾತನಾಡಿದರು. ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ಮೊಂತೆರೊರವರು ವಂದನಾರ್ಪಣೆಗೈದರು.
ಉಪಸ್ಥಿತರು:
1. ಸಂತೋಷ್ ಡಿಸೋಜಾ- ಕೇಂದ್ರೀಯ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
2. ಪೌಲ್ ರೋಲ್ಫಿ ಡಿಕೋಸ್ತಾ-ಸಾರ್ವಜನಿಕ ಸಂಪರ್ಕ ಅಧಿಕಾರಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
3. ರೋಯ್ ಕ್ಯಾಸ್ಟೆಲಿನೊ, ಸಾರ್ವಜನಿಕ ಸಂಪರ್ಕ ಅಧಿಕಾರಿ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯ
4. ಲಾರೆನ್ಸ್ ಡಿಸೋಜಾ, ಉಪಾಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
5. ವಿಲ್ಮಾ ಮೊಂತೇರೊ - ಪ್ರಧಾನ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
6. ಪ್ರಾನ್ಸಿಸ್ ಮೊಂತೇರೊ – ಖಜಾಂಚಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
7. ಆಲ್ವಿನ್ ಡಿಸೋಜಾ, ಪಾನೀರ್-ನಿಕಟಪೂರ್ವ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
8. ಸ್ಟೇನಿ ಲೋಬೊ, ಮಾಜಿ ಅಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
9. ಲಿಯೋ ರೊಡ್ರಿಗಸ್, ಉಪಾಧ್ಯಕ್ಷರು, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)
10. ಓಲ್ವಿನ್ ರೊಡ್ರಿಗಸ್, ಸಹ ಕಾರ್ಯದರ್ಶಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)