ಕ್ರಿಸ್ತ ರಾಜ ದೇವಾಲಯ ಕಯ್ಯಾರ್ ಕ್ಯಾಥೊಲಿಕ್ ಸಭಾ ಘಟಕದ ವತಿಯಿಂದ SSLC ಹಾಗೂ PUC ಯಲ್ಲಿ 75% ಗಿಂತ ಆಧಿಕ ಅಂಕ ಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಂದನೀಯ ಧರ್ಮಗುರುಗಳಾದ ವಿಶಾಲ್ ಮೊನಿಸ್, ಭಗಿನಿ Sr. ರೀನ ಸೆರಾವೊ, ಪಾಲನಾ ಮಂಡಳಿಯ ಉಪಾಧ್ಯಕ್ಷರು ರೋಶನ್ ಡಿಸೋಜ, ಕಾರ್ಯದರ್ಶಿಗಳು ಝೀನ ಡಿಸೋಜ, 21 ಆಯೋಗದ ಸಂಯೋಜಕರು ವಿನ್ಸೆಂಟ್ ಡಿಸೋಜ ಹಾಗೂ ಕ್ಯಾಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಕಿರಣ್ ಕ್ರಾಸ್ತ ಉಪಸ್ಥಿತರಿದ್ದರು. ಕ್ಯಾಥೊಲಿಕ್ ಸಭಾ ಕಾರ್ಯದರ್ಶಿಗಳಾದ ಹರ್ಷ ಕಾರ್ಯಕ್ರಮ ನಿರೂಪಿಸಿದರು. ಕ್ಯಾಥೊಲಿಕ್ ಸಭಾ ಅಧ್ಯಕ್ಷರು ಕಿರಣ್ ಕ್ರಾಸ್ತ ವಂದಿಸಿದರು.