ಕಯ್ಯಾರು ಕ್ಯಾಥೊಲಿಕ್ ಸಭಾ ಘಟಕದ ವತಿಯಿಂದ ಜುಲೈ 13 ಆದಿತ್ಯವಾರದಂದು ಬೆಳಿಗ್ಗೆ ಪೂಜೆಯ ನಂತರ ಶಾಲಾ ಸಭಾಂಗಣದಲ್ಲಿ 70 ವರ್ಷ ಮೇಲ್ಪಟ್ಟ ವರಿಗೆ ಆಯುಷ್ಮಾನ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಲವು ಹಿರಿಯ ನಾಗರಿಕರು ಇದರ ಪ್ರಯೋಜನವನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




