"ಕಥೊಲಿಕ ಮಹಾ ಸಮಾವೇಶ 2020" ಆಮಂತ್ರಣ ಪತ್ರ ಬಿಡುಗಡೆ ದಿನಾಂಕ 14-01-2020ರಂದು ಬೆಳಿಗ್ಗೆ 9.00 ಗಂಟೆಗೆ ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾ ಭವನದಲ್ಲಿ ಜರುಗಿತು. ಇದರ ಉದ್ಘಾಟನೆಯನ್ನು ಪರಮಪೂಜ್ಯ ಡಾ|ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಾಧ್ಯಕ್ಷರು ಮಂಗಳೂರು ಧರ್ಮಪ್ರಾಂತ್ಯ ಇವರು ನೆರವೇರಿಸಿದರು. ಅತೀ ವಂ|ಸ್ವಾಮಿ ಮ್ಯಾಕ್ಸಿಂ ನೊರೊನ್ಹಾ ವಿಕಾರ್ ಜೆರಾಲ್ ಮಂಗಳೂರು ಧರ್ಮಪ್ರಾಂತ್ಯ . ವಂ|ಸ್ವಾಮಿ ಬಿನೊಯ್ ಜೋಸೆಫ್, ಧರ್ಮಾಧ್ಯಕ್ಷರ ಪ್ರತಿನಿಧಿ ಬೆಳ್ತಂಗಡಿ ಧರ್ಮಪ್ರಾಂತ್ಯ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಶ್ರೀ ಪಾವ್ಲ್ ರೊಲ್ಫಿ ಡಿಕೋಸ್ತ ಅಧ್ಯಕ್ಷರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಂ|ಸ್ವಾಮಿ ಜೆ.ಬಿ.ಕ್ರಾಸ್ತಾ, ವಿಕಾರ್ ವಾರ್ ಎಪಿಸ್ಕೋಪಲ್ ಸಿಟಿ ವಲಯ , ವಂ|ಸ್ವಾಮಿ ಮ್ಯಾಥ್ಯು ವಾಸ್, ಆಧ್ಯಾತ್ಮಿಕ ನಿರ್ದೇಶಕರು ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಶ್ರೀ ಜೊಯಲ್ ಮೆಂಡೋನ್ಸಾ, ಸಂಚಾಲಕರು ಸಮಾವೇಶ ಸಮಿತಿ , ವಂ|ಸ್ವಾಮಿ ರೊನಾಲ್ಡ್ ಡಿಸೋಜ,. ನಿರ್ದೇಶಕರು ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯ, ವಂ|ಸ್ವಾಮಿ ಬೆಜಿಲ್ ವಾಸ್, ಧರ್ಮಗುರುಗಳು ಸೇಕ್ರೆಟ್ ಹಾರ್ಟ್ ಚರ್ಚ್ ಮಡಂತ್ಯಾರು, ಶ್ರೀ ಲಿಯೊನ್ ಸಲ್ಡಾನ್ಹಾ, ಅಧ್ಯಕ್ಷರು ಐ.ಸಿ.ವೈ.ಎಮ್. ಮಂಗಳೂರು ಧರ್ಮಪ್ರಾಂತ್ಯ ಮತ್ತು ಶ್ರೀಮತಿ ಟೆರಿ ಪಾಯ್ಸ್, ಅಧ್ಯಕ್ಷರು ಸ್ತ್ರೀ ಮಂಡಳಿ ಮಂಗಳೂರು ಧರ್ಮಪ್ರಾಂತ್ಯ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾರ್ಥನೆ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿ ಶ್ರೀ ಪಾವ್ಲ್ ರೊಲ್ಫಿ ಡಿಕೊಸ್ತರವರು ಉದ್ಘಾಟಕರನ್ನು ವೇದಿಕೆಯ ಗಣ್ಯರನ್ನು ಹಾಗೂ ನೆರೆದ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಕಾರ್ಯಕ್ರಮದಲ್ಲಿ ಗಣ್ಯರಾದ ವಂ| ಸ್ವಾಮಿ ಸ್ಟ್ಯಾನಿ ಪಿಂಟೊ, ಶ್ರೀ ಜೆ.ಆರ್. ಲೋಬೊ, ಶ್ರೀ ವಾಲ್ಟರ್ ಡಿಸೋಜ, ಶ್ರೀ ರೋಯ್ ಕ್ಯಾಸ್ತೆಲಿನೊ, ಶ್ರೀ ಲ್ಯಾನ್ಸಿ ಡಿಕುನ್ಹಾ, ಶ್ರೀ ಸುಶೀಲ್ ನ್ಹೊರೊನ್ಹಾ, ಶ್ರೀ ಮಾರ್ಸೆಲ್ ಮೊಂತೇರೊ, ಶ್ರೀ ಡೆನಿಸ್ ಡಿ’ಸಿಲ್ವಾ ಹಾಗೂ ಕಥೊಲಿಕ್ ಸಭಾ, ಐ.ಸಿ.ವೈ.ಎಮ್., ಸ್ತ್ರೀ ಸಂಘಟನೆಯ ಪದಾಧಿಕಾರಿಗಳು, ಕಥೊಲಿಕ್ ಸಭಾ ವಲಯ ಮತ್ತು ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು, ಬೆಳ್ತಂಗಡಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆಯನ್ನು ಪರಮಪೂಜ್ಯರು ಉದ್ಘಾಟಿಸಿ ಶುಭ ಹಾರೈಸಿ ದೇವರ ಆಶೀರ್ವಾದವನ್ನು ಯಾಚಿಸಿ ತಮ್ಮ ಸಂದೇಶ ನೀಡಿ, ಫೆಬ್ರವರಿ 2ನೇ ತಾರೀಕಿನಂದು ಮಡಂತ್ಯಾರು ಇಲ್ಲಿ ನಡೆಯುವ ಸಮಾವೇಶಕ್ಕೆ ನಾನು ಬರುತ್ತೇನೆ ನೀವೆಲ್ಲರೂ ಬರಬೇಕೆಂದು ಹೇಳಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರತಿನಿಧಿ ವಂ|ಸ್ವಾಮಿ ಬಿನೊಯ್ ಜೋಸೆಫ್ ಶುಭ ಹಾರೈಸಿ ಬೆಳ್ತಂಗಡಿ ಧರ್ಮಪ್ರಾಂತ್ಯದ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ಕೊಟ್ಟರು. ಸಂಚಾಲಕರಾದ ಶ್ರೀ ಜೊಯಲ್ ಮೆಂಡೋನ್ಸಾ ರವರು ಧನ್ಯವಾದ ನೀಡಿದರು. ಶ್ರೀ ವಾಲ್ಟರ್ ಮೊನಿಸ್ ಕಾರ್ಯಕ್ರಮ ನಿರೂಪಿಸಿದರು.

Comments powered by CComment

Home | About | NewsSitemap | Contact

Copyright ©2015 www.catholicsabha.org. Powered by eCreators

Contact Us

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474