ಪತ್ರಿಕಾ ಪ್ರಕಟಣೆ

April 18, 2024 : ಮುಂಚಿತವಾಗಿ ನಿಗದಿಪಡಿಸಿದ ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಕ್ಕೆ ಹಾಜರಾಗುವವರು ಮೊದಲು ಮತದಾನ ಮಾಡಿ ತದನಂತರ ಕಾರ್ಯಕ್ರಮಕ್ಕೆ ಭಾಗವಹಿಸಿ, ಅಂತೆಯೇ ಹೊರ ರಾಜ್ಯದಲ್ಲಿದ್ದ ನಿಮ್ಮ ಮಕ್ಕಳು ಹಾಗೂ ಸಂಬಂಧಿಕರನ್ನು ಕರೆಸಿ ಮತದಾನವನ್ನು ಮಾಡಿಸಿ ಎಂದು ಕ್ರೈಸ್ತ ಸಮುದಾಯಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ.) ಕೇಂದ್ರಿಯ ಅಧ್ಯಕ್ಷ ಶ್ರೀ ಆಲ್ವಿನ್ ಡಿಸೋಜ ಕರೆ ನೀಡಿದರು.

ಈಗಾಗಲೇ ಚುನಾವಣಾ ಆಯೋಗವು ಹೆಚ್ಚಿನ ಮತದಾನ ನಡೆಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅತ್ಯಧಿಕ ಮತದಾನ ನಡೆಯಲು ನಾವೆಲ್ಲರೂ ಪ್ರಯತ್ನಿಸಬೇಕು. ಕೆಲಸಕ್ಕೆ ಹೋಗುವವರು ಮೊದಲು ಮತದಾನ ಮಾಡಿ ನಂತರ ಕೆಲಸಕ್ಕೆ ಹೋಗಬೇಕು. ರಜೆಯಿಂದಾಗಿ ಮನೆಯಲ್ಲಿದ್ದವರು ಕಡ್ಡಾಯವಾಗಿ ಮತದಾನ ಮಾಡಿ 100% ಮತದಾನ ಆಗುವಂತೆ ಶ್ರಮಿಸಬೇಕು. ಪ್ರತಿಯೊಬ್ಬರ ಅಮೂಲ್ಯ ಮತದಿಂದ ಉತ್ತಮ ಸರ್ಕಾರ ರಚನೆ ಸಾಧ್ಯ. ಮತದಾನ ನಮ್ಮ ಹಕ್ಕು, ತಪ್ಪಿದಲ್ಲಿ ಮುಂದಿನ ಅನಾಹುತಗಳಿಗೆ ನಾವೇ ಕಾರಣಕರ್ತರು ಆಗುತ್ತೇವೆ ಎಂದು ಅಭಿಪ್ರಾಯಪಟ್ಟರು.

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474