ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ (ರಿ) ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ ಮಾ.೧೭ರಂದು ಮಡಂತ್ಯಾರ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಕೇಂದ್ರೀಯ ಮಾಜಿ ಅಧ್ಯಕ್ಷರು ಹಾಗೂ ಅಂತರಾಷ್ಟ್ರೀಯ ಉದ್ಯಮಿ ವಾಲ್ಟರ್ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ತಮ್ಮ ದಿಕ್ಸೂಚಿ ಭಾಷಣವನ್ನು ಮಾಡಿ ಮಾರ್ಗದರ್ಶನ ನೀಡಿದರು.

ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಸ್ವಾಮಿ ವಾಲ್ಟರ್ ಡಿಮೆಲ್ಲೋರವರು ಮಾತನಾಡಿ ಕೆಥೊಲಿಕ್ ಸಭಾದ ಬೆಳವಣಿಗೆ ಹಾಗೂ ಮುಂದಿರುವ ಯೋಜನೆಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಕಾರ್ಯಕ್ರಮದಲ್ಲಿ ಮಡಂತ್ಯಾರ್ ಘಟಕದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಸ್ವಾಮಿ ಸ್ಟಾನಿ ಗೊವಿಯಸ್ ಸಂದೇಶ ನೀಡಿ ಶುಭ ಹಾರೈಸಿದರು.

ವಲಯದಿಂದ ಪದಾದಿಕಾರಿಗಳಾಗಿ ಕೇಂದ್ರಿಯ, ಪ್ರಾಂತೀಯ ಹಾಗೂ ವಲಯದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಪ್ರಸ್ತುತ ವರ್ಷದಲ್ಲಿ ವಿವಿಧ ರೀತಿಯಲ್ಲಿ ಸಾಧನೆಗೈದ ಘಟಕಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷರಾದ ಲಿಯೋ ರೋಡ್ರಿಗಸ್ ವಹಿಸಿದ್ದರು ತಮ್ಮ ಅಧ್ಯಕ್ಷೀಯ ಭಾಷಣವನ್ನು ನೀಡಿದರು.

ವೇದಿಕೆಯಲ್ಲಿ ವಲಯ ಕಾರ್ಯದರ್ಶಿ ಹಾಗೂ ಮಡಂತ್ಯಾರ್ ಘಟಕದ ಅಧ್ಯಕ್ಷರಾದ ಪಿಲಿಪ್ ಡಿಕುನ್ಹ, ಘಟಕದ ಕಾರ್ಯದರ್ಶಿ ಐವನ್ ಸಿಕ್ವೇರಾ ಉಪಸ್ಥಿತರಿದ್ದರು.

ಎಡ್ವರ್ಡ್ ರೇಗೊ ಸ್ವಾಗತಿಸಿ, ಪಿಲಿಪ್ ಡಿಕುನ್ಹ ವಂದಿಸಿ, ವಾಲ್ಟರ್ ಮೋನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474