ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ.) ಇದರ ಮುಂದಾಳುತ್ವದಲ್ಲಿ 12 ವಲಯಗಳ ಸಹಯೋಗದೊಂದಿಗೆ 2024 ನೇ ವರ್ಷದ ಸ್ತ್ರೀಯರ ದಿನಾಚರಣೆ ದಿನಾಂಕ 3/3/2024 ರಂದು ಬೆಳಿಗ್ಗೆ 8.30 ಘಂಟೆಗೆ ಸರಿಯಾಗಿ ಮಂಗಳೂರು ಕೊಡಿಯಾಳ್‍ಬೈಲ್‍ನಲ್ಲಿರುವ ಬಿಷಪ್ಸ್ ಹೌಸ್ ಚಾಪೆಲ್‍ನಲ್ಲಿ ದಿವ್ಯ ಬಲಿಪೂಜೆಯೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮವನ್ನು ಸಂತ ಅಲೋಶಿಯಸ್ ಕಾಲೇಜ್, ಲೊಯೊಲಾ ಹೋಲ್ ಇಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಶತೆಯನ್ನು ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾ ಪಾನೀರ್ ಇವರು ವೇದಿಕೆಯಲ್ಲಿ ಆಸೀನರಾದ ಇತರ ಗಣ್ಯ ವ್ಯಕ್ತಿಗಳೊಂದಿಗೆ ಸೇರಿ ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಮುಖ ಅತಿಥಿಯಾಗಿ ವೆನ್‍ಲಾಕ್ ಹೋಸ್ಪಿಟಲ್ ಇಲ್ಲಿನ ಡಿಎಮ್‍ಓ ಆಗಿರುವ ಡಾ.ಜೆಸಿಂತಾ ಡಿ ಸೋಜಾ ಉಪಸ್ಥಿತರಿದ್ದರು.

ನಂತರ ವೊವಿಯೊ, ಕೋಮಿಡಿ ಸ್ಕಿಟ್ ಮತ್ತು ಕಸದಿಂದ ರಸ ಈ ಮೂರು ಸ್ಪರ್ಧೆಗಳನ್ನು ಸ್ತ್ರೀಯರಿಗಾಗಿ ಆಯೋಜಿಸಲಾಗಿತ್ತು. ಇದರಲ್ಲಿ ಬಹಳಷ್ಟು ಸ್ತ್ರೀಯರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಹಾಜರಾದ ಎಲ್ಲ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮನೋರಂಜನೆಗಾಗಿ ಸಣ್ಣಪುಟ್ಟ ಆಟಗಳನ್ನು ಆಡಿಸಿದರು.

ಮಧ್ಯಾಹ್ನ 2 ಘಂಟೆಗೆ ಸರಿಯಾಗಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಮ್ಲಿನ್ ಡಿಸೋಜಾ, ಕಮರ್ಸಿಯಲ್ ಟ್ಯಾಕ್ಸ್ ಒಫೀಸರ್, ಎನ್ ಫೋರ್ಸ್ ಮೆಂಟ್, ಮಂಗಳೂರು ಇವರು ವೇದಿಕೆಯನ್ನು ಅಲಂಕರಿಸಿದ್ದರು.

ಡಾ|ಕೇರೊಲಿನ್ ಪಿ ಡಿ ಸೋಜಾ ಇವರು ಸ್ತ್ರೀಯರ ಮಾನಸಿಕ ಒತ್ತಡ ಮತ್ತು ಪರಿಹಾರ ಇದರ ಬಗ್ಗೆ ಮಾಹಿತಿಯನ್ನು ನೀಡಿದರು.

ಗೌರವ ಉಪಸ್ಥಿತಿಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಕಾರ್ಯದರ್ಶಿ ಶ್ರೀಮತಿ ವಿಲ್ಮಾ ಮೊಂತೇರೊ, ಎಪಿಸ್ಕೋಪಾಲ್ ಸಿಟಿ ವಾರಾಡೊ ಇದರ ಅಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಫಾದರ್ ಜೋನ್ ವಾಸ್, ಅಧ್ಯಕ್ಷರಾದ ಶ್ರೀ ಸ್ಟೀವನ್ ರೊಡ್ರಿಗಸ್, ಕಥೊಲಿಕ್ ಸಭಾ ಇದರ ಮಾಜಿ ಹಾಗೂ ಏಕಮಾತ್ರ ಸ್ತ್ರೀ ಅಧ್ಯಕ್ಷೆಯಾದ ಶ್ರೀಮತಿ ಫ್ಲೇವಿ ಡಿ ಸೋಜಾ, ಸ್ತ್ರೀ ಸಶಕ್ತೀಕರಣ ಇದರ ಸಂಚಾಲಕಿ ಕುಮಾರಿ ಮೆಲ್ರೀಡಾ ರೊಡ್ರಿಗಸ್, ಸಹ ಸಂಚಾಲಕಿ ಶ್ರೀಮತಿ ಲವೀನಾ ಗ್ರೆಟ್ಟಾ ಡಿಸೋಜಾ, ಶ್ರೀಮತಿ ಮೋಲಿ ಶಾಂತಿ ಸಲ್ಡಾನ್ಹಾ, ಶ್ರೀಮತಿ ಲಿಜ್ಜಿ ಪಿಂಟೊ ಮತ್ತು 12 ವಲಯಗಳ ಸ್ತ್ರೀ ಹಿತಾ ಸಂಚಾಲಕಿಗಳು ಹಾಜರಿದ್ದರು.

ಅತಿಥಿಗಳು ತಮ್ಮ ಸಂದೇಶವನ್ನು ನೀಡಿದರು.

6 ವಿವಿಧ ಕ್ಷ್ರೇತ್ರ್ರದಲ್ಲಿ ವಿಶೇಷ ಸಾಧನೆಗೈದ 6 ಸ್ತ್ರೀಯರನ್ನು ಸನ್ಮಾನಿಸಲಾಯಿತು.

ಕಥೊಲಿಕ್ ಸಭಾ ಘಟಕದ ಎಲ್ಲಾ ಸ್ತ್ರೀ ಅಧ್ಯಕ್ಷರನ್ನು ಅವರ ಸೇವೆಗಾಗಿ ಸನ್ಮಾನಿಸಲಾಯಿತು.

ಕಥೊಲಿಕ್ ಸಭಾ ಸಂಘಕ್ಕೆ ಅತ್ಯಧಿಕ ಹೊಸ ಸದಸ್ಯರನ್ನು ಸೇರಿಸಿದವರನ್ನು ಸನ್ಮಾನಿಸಲಾಯಿತು.

ಮೂರೂ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.

ಕಾರ್ಯದರ್ಶಿಯಾದ ವಿಲ್ಮಾ ಮೊಂತೇರೊರವರು ಎಲ್ಲರನ್ನು ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Comments powered by CComment

Latest News

Home | About | NewsSitemap | Contact

Copyright ©2015 www.catholicsabha.org. Powered by eCreators

Catholic Sabha Mangalore Pradesh (R)
Bishop's House
Kodialbail Post
Mangalore - 575 003

Phone: 0824-2427474