ದಿನಾಂಕ 05-10-2025 ರಂದು ಕ್ಯಾಥೊಲಿಕ್ ಸಭಾ ಕಯ್ಯಾರ್ ಘಟಕದ ವತಿಯಿಂದ ವಾಹನ ಶುದ್ದೀಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ವಂದನೀಯ ಗುರುಗಳಾದ ವಿಶಾಲ್ ಮೆಲ್ವಿನ್ ಮೊನಿಸ್ ಅವರು ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ವಾಹನ ಆಶೀರ್ವಚನಗೈದರು. ಶ್ರೀಯುತ ರಾಜ್ ಕುಮಾರ್ ಅವರು ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಸಿ ಸರ್ವರನ್ನು ಸ್ವಾಗತಿಸಿದರು. ಶ್ರೀಮತಿ ಹರ್ಷ ವಂದಿಸಿದರು. ಕ್ಯಾಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಶ್ರೀ ಕಿರಣ್ ಕ್ರಾಸ್ತ ಮತ್ತು ಭಗಿನಿ ರೀನಾ ಸೆರಾವೊ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನೆರೆದಿದ್ದ ಸರ್ವರಿಗೂ ಕ್ಯಾಥೊಲಿಕ್ ಸಭೆಯ ವತಿಯಿಂದ ಸಿಹಿ ತಿಂಡಿಗಳನ್ನು ಹಂಚಲಾಯಿತು.
.jpg)
.jpg)
.jpg)
.jpg)
.jpg)
.jpg)
.jpg)



