ಕ್ಯಾಥೊಲಿಕ್ ಸಭಾ ಕಯ್ಯಾರು ಘಟಕದ ವತಿಯಿಂದ ದಿನಾಂಕ 26-10-2025 ರಂದು ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಇಗರ್ಜಿಯ ವಂದನೀಯ ಧರ್ಮಗುರುಗಳಾದ ವಿಶಾಲ್ ಮೆಲ್ವಿನ್ ಮೊನಿಸ್, ಭಗಿನಿ ರೀನ ಸೆರಾವೊ, ಪಾಲನಾ ಮಂಡಳಿಯ ಅಧ್ಯಕ್ಷರಾದ ರೋಶನ್ ಡಿಸೋಜ ಹಾಗೂ ಕ್ಯಾಥೊಲಿಕ್ ಸಭಾ ಘಟಕದ ಅಧ್ಯಕ್ಷರಾದ ಕಿರಣ್ ಕ್ರಾಸ್ತ ಅವರು ಸಮಾರೋಪ ಕಾರ್ಯಕ್ರಮದಲ್ಲಿ ಹಾಜರಿದ್ದರು. ಭಾಷಣ ಸ್ಪರ್ಧೆಗೆ ತೀರ್ಪುಗಾರರಾಗಿ ಮಂಜೇಶ್ವರ ಇಗರ್ಜಿಯ ರೀನ ಮೊಂತೆರೊ ಹಾಗೂ ಜೆಸಿಂತಾ ಡಿಸೋಜ ಅವರು ಸಹಕರಿಸಿದರು ಹಾಗೂ ವಿಜೇತರ ಹೆಸರುಗಳನ್ನು ಘೋಷಿಸಿದರು. ಸುಮಾರು 45 ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕ್ಯಾಥೊಲಿಕ್ ಸಭಾ ಸದಸ್ಯರು ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಸಂಪೂರ್ಣ ಸಹಕರಿಸಿದರು. ಶ್ರೀಯುತ ಡೆನಿಸ್ ಮೊಂತೆರೊ ಅವರು ನೆರೆದಿದ್ದ ಸರ್ವರನ್ನು ಸ್ವಾಗತಿಸಿದರು. ಅಧ್ಯಕ್ಷ ಕಿರಣ್ ಕ್ರಾಸ್ತ ಅವರು ವಂದಿಸಿದರು ಹಾಗೂ ಶ್ರೀಮತಿ ಸರಿತ ಡಿಸೋಜ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
.jpg)
.jpg)
.jpg)
.jpg)
.jpg)
.jpg)



