ಮಡಂತ್ಯಾರ್: ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮಡಂತ್ಯಾರ್ ಘಟಕ, ರಂಗ್ ತರಂಗ್ ನಾಟಕ ತಂಡ ಮತ್ತು ಪೋಯೋಟಿಕಾ ಸಹಯೋಗದಲ್ಲಿ 40ನೇ ಕವಿಗೋಷ್ಠಿಯು ಮಡಂತ್ಯಾರ್ ಸಕ್ರೆಡ್ ಹಾರ್ಟ್ ಸಭಾಭವನದಲ್ಲಿ ನಡೆಯಿತು.
ಮಡಂತ್ಯಾರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಡಾ. ಸ್ಟ್ಯಾನಿ ಗೋವಿಯಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯ ಹಾಗೂ ಸಂಸ್ಕೃತಿಯ ಮಹತ್ವವನ್ನು ವಿಸ್ತೃತವಾಗಿ ವಿವರಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಹಾಯಕ ಧರ್ಮಗುರು ಫಾ. ಲ್ಯಾರಿ ಪಿಂಟೋ ಪ್ರಾರ್ಥನೆಯ ನೆರವೇರಿಸಿದರು.
ಘಟಕದ ಅಧ್ಯಕ್ಷ ಶ್ರೀ ವಿನ್ಸೆಂಟ್ ಡಿಸೋಜಾ ಅವರು ಸ್ವಾಗತ ಭಾಷಣ ನೀಡಿ ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಾರ್ಯಕ್ರಮವನ್ನು ಅಧಿಕೃತವಾಗಿ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಲಿಯೋ ರೋಡ್ರಿಗಸ್ ಅವರು ಉದ್ಘಾಟಿಸಿದರು., ಅವರು ಉದ್ಘಾಟನಾ ಭಾಷಣದಲ್ಲಿ ಸಮಾಜದಲ್ಲಿ ಸಾಹಿತ್ಯ ಮತ್ತು ಸಂಘಟನೆಯ ಪಾತ್ರದ ಕುರಿತು ಅನಾವರಣಗೊಳಿಸಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಭಾಗಗಳಿಂದ ಆಗಮಿಸಿದ 32 ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ಓದಿ ಸಭಿಕರನ್ನು ಭಾವೋದ್ರೇಕಗೊಳಿಸಿದರು. ನಂತರ, ರಂಗ್ ತರಂಗ್ ತಂಡದಿಂದ ಕಲೆಗೂ ನಯಕ್ಕೂ ಕನ್ನಡಿ ಹಿಡಿಯುವಂತಹ ಸಾಂಸ್ಕೃತಿಕ ಕಾರ್ಯಕ್ರಮವೊಂದು ನಡೆಯಿತು.
ಈ ಸಂದರ್ಭದಲ್ಲಿ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಡಾ. ಟೈಸನ್ ಡಿಕುನ್ಹಾ ಅವರಿಗೆ ಸನ್ಮಾನ ಸಲ್ಲಿಸಲಾಯಿತು. ಮಾರ್ಗದರ್ಶನಕ್ಕಾಗಿ ಕ್ಯಾಥೋಲಿಕ್ ಸಭಾ ಕೇಂದ್ರ ಸಮಿತಿಯ ಸಲಹೆಗಾರರಾದ ಶ್ರೀ ರೋಲ್ಫಿ ಡಿಕೋಸ್ತಾ ಅವರಿಗೂ ಗೌರವ ಅರ್ಪಿಸಲಾಯಿತು
ಕಾರ್ಯಕ್ರಮದ ಹಿನ್ನೆಲೆಯಲ್ಲಿ ‘ಅಮಿ ಆನಿ ಆಮ್ಚೆ ’ ಸಂಘದ ಅಧ್ಯಕ್ಷರಾದ ಶ್ರೀ ಡೆನಿಸ್ ಡಿಸಿಲ್ವಾ ಕಥೋಲಿಕ್ ಸಭ ಕಾರ್ಯಕ್ರಮಗಳ್ನು ಶ್ಲಾಗಿಸಿ ಶುಭಾಶಯ ನೀಡಿದರು. ಇನ್ನಿತರ ಗಣ್ಯ ಅತಿಥಿಗಳಲ್ಲಿ , ಪಾಲನ ಮಂಡಳಿ ಉಪಾಧ್ಯಕ್ಷರಾದ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೇಲ್ಸನ್ ಲಾಸ್ರದೋ, ಪೋಯೋಟಿಕ್ ಕವಿಗೋಷ್ಠಿಯ
ಗುರಿಕಾರ ನವೀನ್ ಪಿರೇರಾ ಮತ್ತು ಬೆಳ್ತಂಗಡಿ ಕಥೋಲಿಕ್ ಸಭಾ ವಲಯ ಅಧ್ಯಕ್ಷ ಅಲ್ಬರ್ಟ್ ಸುನಿಲ್ ಮೊನಿಸ್ ಉಪಸ್ಥಿತರಿದ್ದರು. ಬೆಳ್ತಂಗಡಿ ವಲಯದ ಹಲವಾರು ಪದಾಧಿಕಾರಿಗಳು ಹಾಗೂ ಊರಿನ ಕಲಾಭಿಮಾನಿ ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿಶೇಷ ಆಕರ್ಷಣೆಯಾಗಿ ಬ್ಲೂ ಬ್ರಾಸ್ ಬ್ಯಾಂಡ್ ಬದ್ಯಾರ್ ಅಭಿಮಾನಿಗಳನ್ನು ರಂಜಿಸಿದರು.
ಕಾರ್ಯಕ್ರಮದ ಅಂತ್ಯದಲ್ಲಿ ರಂಗ್ ತರಾಂಗ್ ಗುರಿಕಾರಾ ಶ್ರೀ ವಿನಯ್ ಡಿಸೋಜಾ ಧನ್ಯವಾದ ಸಮರ್ಪಿಸಿದಾರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ವಿನ್ಸಿ ಮೊರಾಸ್ ಸುಗಮವಾಗಿ ನಿರ್ವಹಿಸಿದರು.
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)
.jpg)



