ವರದಿ: ವಿಲ್ಸನ್ ಪಿಂಟೊ, ತಾಕೋಡೆ

ಮೌಂಟ್ ರೋಜರಿ ಆಸ್ಪತ್ರೆ ಮತ್ತು ಕಥೊಲಿಕ್ ಸಭಾ ಮೂಡುಬಿದ್ರಿ ವಲಯ ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ದಿನಾಂಕ 05-12-2021 ರಂದು ಮೌಂಟ್ ರೋಜರಿ ಆಸ್ಪತ್ರೆ ಅಲಂಗಾರ್ ವಠಾರದಲ್ಲಿ ನೆರವೇರಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂದನೀಯ ಗುರು ಎಡ್ವಿನ್ ಸಿ ಪಿಂಟೊರವರು ಶೀಘ್ರವೇ ಮೌಂಟ್ ರೋಜರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗುವುದು. ಈ ಶಿಬಿರದ ಪ್ರಯೋಜನ ಎಲ್ಲರಿಗೂ ಲಭಿಸಲಿ ಎಂದು ಹಾರೈಸಿದರು.

ಕಥೊಲಿಕ್ ಸಭಾ ಮೂಡುಬಿದ್ರಿ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ನೋರ್ಬಟೈನ್ ಸಂಸ್ಥೆಯ ವಂದನೀಯ ಗುರು ದೀಪಕ್ ನೊರೋನ್ಹಾರವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ಸುನಿಲ್ ಮೆಂಡಿಸ್ ಉಚಿತ ಆರೋಗ್ಯ ಕಾರ್ಡನ್ನು ಉದ್ಘಾಟಿಸಿದರು. ಸಂಸ್ಥೆಯ ಆಡಳಿತ ಅಧಿಕಾರಿ ಸಿ| ಡಯನಾ ಡಿ’ಸೋಜ ಅತಿಥಿಗಳನ್ನು ಸ್ವಾಗತಿಸಿ ಈ ಶಿಬಿರದಲ್ಲಿ ಲಭಿಸುವ ಸೇವೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಕಥೊಲಿಕ್ ಸಭಾ ಮೂಡುಬಿದ್ರಿ ವಲಯದ ಅಧ್ಯಕ್ಷರಾದ ಮನೋಹರ್ ಕುಟೀನ್ಹಾ, ಕಾರ್ಯದರ್ಶಿ ವಿಲ್ಸನ್ ಪಿಂಟೊ, ಡಾ| ಶುಶಾಂತ್ ಶೆಟ್ಟಿ (ENT surgeon), ಡಾ| ವಿನಯ್ (Eye surgeon), ಮತ್ತು ಶ್ರೀ ರೊನಾಲ್ಡ್ ಕುಲಾಸೊ ಹಾಜರಿದ್ದರು.

ಸುಮಾರು 587ಕ್ಕಿಂತ ಅಧಿಕ ಜನರು ಶಿಬಿರದ ಪ್ರಯೋಜನ ಪಡೆದರು. ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಾಲಾಗಿದ್ದು 170 ಮಂದಿ ಇದರ ಪ್ರಯೋಜನ ಪಡೆದರು ಹಾಗೂ ಶಿಬಿರದಲ್ಲಿ ಪಾಲ್ಗೊಂಡರವರಿಗೆ ಉಚಿತವಾಗಿ ಆರೋಗ್ಯ ಕಾರ್ಡನ್ನು ವಿತರಿಸಲಾಯಿತು.

ಕಥೊಲಿಕ್ ಸಭೆಯ ವಿವಿಧ ಘಟಕದ ಸದಸ್ಯರು ಮತ್ತು ಮೌಂಟ್ ರೋಜರಿಯ ಧರ್ಮ ಭಗಿಣಿಯರು ಸ್ವಯಂ ಸೇವಕರಾಗಿ ಸೇವೆ ನೀಡಿ ಶಿಬಿರದ ಯಶಸ್ವಿಗೆ ಕೈ ಜೋಡಿಸಿದರು. ಸಿ| ಪ್ರತಿಷ್ಟಾರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮನೋಹರ್ ಕುಟೀನ್ಹಾರವರು ವಂದನಾರ್ಪಣೆಗೈದರು.