Oct 26 : ಕಥೊಲಿಕ್ ಸಭಾ ಮಂಗ್ಳೂರ್ ಪ್ರದೇಶ್(ರಿ) ಹಾಗೂ ಮಣಿಪಾಲ್ ಸಿಗ್ನಾ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ಸಹಯೋಗದೊಂದಿಗೆ ಕಥೊಲಿಕ್ ಸಭಾ ಆರೋಗ್ಯ ವಿಮಾ ಯೋಜನೆಯನ್ನು ಜಾತಿ, ಮತ ಭೇದವಿಲ್ಲದೆ ಎಲ್ಲಾ ಜನರ ಸ್ವಸ್ಥ್ಯ ಆರೋಗ್ಯದ ದೃಷ್ಟಿಯಿಂದ ಹಮ್ಮಿಕೊಂಡಿರುತ್ತಾರೆ. ಈ ಯೋಜನೆಯಡಿ ಪ್ರತೀ ಕುಟುಂಬಕ್ಕೆ ವರ್ಷಕ್ಕೆ ರೂ 50,000/- ವೈದ್ಯಕೀಯ ಸವಲತ್ತುಗಳನ್ನು ಮಣಿಪಾಲ್ ಗ್ರೂಪ್ ನಿಗದಿಪಡಿಸಿದ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಈ ನೋಂದವಣಿ ಪ್ರಕ್ರಿಯೆಯು ನವೆಂಬರ್ 1, 2020 ರಿಂದ ನವೆಂಬರ್ 15, 2020 ವರೆಗೆ ನಡೆಯಲಿರುವುದು. ಈ ಹಿಂದಿನ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಹಿಸ್ಟಿರೆಕ್ಟೊಮಿ, ಅಪೆಂಡೆಕ್ಟೊಮಿ, ನಾರ್ಮಲ್ ಡೆಲಿವರಿ, ಡೆಲಿವರಿ ಸಿ-ಸೆಕ್ಷನ್ ಮೊದಲಾದ ಶಸ್ತ್ರ ಚಿಕಿತ್ಸೆಗಳಿಗೆ 25 ಸಾವಿರ ರೂ. ಮಾತ್ರ ವಿಮಾ ಸವಲತ್ತು ಪಡೆಯುವ ಮಿತಿ ಇತ್ತು. ಹೊಸ ಯೋಜನೆಯಲ್ಲಿ ಯಾವುದೇ ಚಿಕಿತ್ಸೆಗೆ ಪ್ರತ್ಯೇಕ ಮಿತಿ ಇಲ್ಲದೆ ಶೇ. 10 ಪಾವತಿಯೊಂದಿಗೆ 50 ಸಾವಿರ ಸವಲತ್ತು ಪಡೆಯುವ ಆರೋಗ್ಯ ವಿಮಾ ಯೋಜನೆ ಇದಾಗಿದೆ. ವಿಮಾ ಕುಟುಂಬದ ಸದಸ್ಯ ಯಾವುದೇ ರೋಗದ ಚಿಕಿತ್ಸೆಗೆ ಒಳರೋಗಿಯಾಗಿ ದಾಖಲಾದಲ್ಲಿ ನಗದು ರಹಿತ ಚಿಕಿತ್ಸೆ ಪಡೆಯಬಹುದು. ವಿಮಾ ಅವಧಿಯಲ್ಲಿ ಕುಟುಂಬದ ಯಾವುದೇ ಸದಸ್ಯ ಅಪಘಾತದಲ್ಲಿ ಮೃತಪಟ್ಟಲ್ಲಿ 50 ಸಾವಿರ ರೂ. ಪರಿಹಾರ ಪಡೆಯಬಹುದು. ನವ ಜಾತ ಶಿಶುವಿನ ಚಿಕಿತ್ಸೆ ಆರೈಕೆಗೂ ಯೋಜನೆ ಅನ್ವಯವಾಗಲಿದೆ.

ಈ ಹಿಂದೆ ಮಣಿಪಾಲ್ ಆರೋಗ್ಯ ಸುರಕ್ಷಾ ಕಾರ್ಡ್ ಹೊಂದಿದ್ದ ಸದಸ್ಯರು ಹಾಗೂ ಹೊಸದಾಗಿ ಕಾರ್ಡ್ ಮಾಡಲಿಚ್ಚಿಸುವವರು ಅಥವ ಫಾ| ಮುಲ್ಲರ್ಸ್ ಆಸ್ಪತ್ರೆಯ ರಿಯಾಯ್ತಿ ಕಾರ್ಡುಗಳನ್ನು ಪಡೆಯಲಿಚ್ಚಿಸುವವರು ಕಥೊಲಿಕ್ ಸಭೆಯ ಘಟಕಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಥೊಲಿಕ್ ಸಭೆಯ ಕೇಂದ್ರೀಯ ಅಧ್ಯಕ್ಷರಾದ ಶ್ರೀ ಪಾವ್ಲ್ ರೊಲ್ಫಿ ಡಿ’ಕೊಸ್ತಾ ರವರು ತಿಳಿಸಿದ್ದಾರೆ.